ಕಾಳಗಿ :-ಕಾಳಗಿ ಪಟ್ಟಣದ ಶ್ರೀ ಹಿರೊಡೇಶ್ವರ ದೇವಸ್ಥಾನದಲ್ಲಿ ಇಂದು ದಿನಾಂಕ 26-10-2025 ರಂದು ಏಕಲ್ ಅಭಿಯಾನ ಕರ್ನಾಟಕ ಕಲಬುರಗಿ ಅಂಚಲ ಕಾಳಗಿ ಸಂಚ್ ವತಿಯಿಂದ ಮಾಸಿಕವರ್ಗವನ್ನು ಮಾಡಲಾಯಿತು. ಈ ಮಾಸಿಕವರ್ಗದಲ್ಲಿ ಕಾಳಗಿ ಸಂಚಿನ 30 ಹಳ್ಳಿಯ ಆಚಾರ್ಯರು ಹಾಜರಿದ್ದರು. ಎಲ್ಲಾ ಆಚಾರ್ಯರ ಮೂಲಕ ಮಕ್ಕಳ ನೋಟ್ ಬುಕ್ ವಿತರಣೆ ಮಾಡಲಾಯಿತು. ಏಕಲ್ ವಿದ್ಯಾಲಯವು 1986ರಲ್ಲಿ ಸ್ಥಾಪಿತವಾಗಿ ಭಾರತ ದೇಶದಾದ್ಯಂತ ಸುಮಾರು ಒಂದು ಲಕ್ಷ ಹಳ್ಳಿಗಳಲ್ಲಿರುವ ಗ್ರಾಮೀಣ ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣವನ್ನು ಇದರಲ್ಲಿ ಮುಖ್ಯವಾಗಿ ದೇಶಭಕ್ತಿಗೀತೆ ಹಾಡುಗಳು ಅಭಿನಯ ಗೀತೆಗಳು ದೀಪ ಪೂಜೆ ಗೋ ಪೂಜೆ ತುಳಸಿಪೂಜೆ ಮತ್ತಿತ್ತರ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುತ್ತದೆ. ಪ್ರಯುಕ್ತ ಇಂದು ಕಲಬುರಗಿ ಅಂಚಲದ ಕಾಳಗಿ ಸಂಚನ 30 ಏಕಲ ವಿದ್ಯಾಲಯಗಳ ನೋಟ್ ಬುಕ್ ವಿತರಣೆ ಏಕಲ ವಿದ್ಯಾಲಯದ ಆಚಾರ್ಯರಿಗೆ ನೀಡುವ ಮೂಲಕ ನೋಟಬುಕ್ ವಿತರಣೆ ಮಾಡಲಾಯಿತು. ಕಾಳಗಿ ಸಂಚ್ ಸಮಿತಿಯ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಕಾಂತಿ ಮತ್ತು ಉಪ ಅಧ್ಯಕ್ಷರಾದ ಶ್ರೀ ರಮೇಶ S ನಾಮದಾರ. ಮತ್ತು ಅಂಚಲ ಪ್ರಶಿಕ್ಷಣ ಪ್ರಮುಖ ಶ್ರೀಮತಿ ಲಕ್ಷ್ಮಿ ಮಠಪತಿ ಮುಧೋಳ ಮತ್ತು ಅಕ್ಷಯಕುಮಾರ ಎಸ್ ಕಾಳಗಿ. ಶ್ರೀ ಲೋಕೇಶ. ಶ್ರೀ ಸಿದ್ದಲಿಂಗ ಪೂಜಾರಿ ಮತ್ತು ಕಾಳಗಿ ತಾಲೂಕಿನ ಎಲ್ಲಾ ಹಳ್ಳಿಯ ಆಚಾರ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಕಾಳಗಿ ಹಿರೋಡೆಶ್ವರ ದೇವಸ್ಥಾನದಲ್ಲಿ ಏಕಾಲ ಅಭಿಯಾನ












