ಏಪ್ರಿಲ್ 14ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ಸಮಾರಂಭ ನಾಡಕಚೇರಿಯಲ್ಲಿ ಫೋಟೋ ಪೂಜೆ ಮೂಲಕ ನೆರವೇರಿತು. ಈ ಸಂದರ್ಭದಲ್ಲಿ ಮಹಾ ನಾಯಕನ ಫೋಟೋ ಪೂಜೆ ವೇಳೆಗೆ ನಾಡಕಚೇರಿಯ ನಿಂಬರ್ಗಾ ಅಧಿಕಾರಿಗಳಾದ ಸೀರೆನಾ ಕೌಲಗ, ಸರಿತಾ ಬುಸುನೂರ್, ರಂಜಿತಾ ಕಡಗಂಚಿ, ಪ್ರಭುಲಿಂಗ ತಟ್ಟೆ, ಮಹೇಶ ಹತ್ತಿ, ಮಹದೇವ, ಮಲ್ಲಿನಾಥ ಚಟ್ಟರ್ಕಿ ಸೇರಿದಂತೆ ಹಲವು ಅಧಿಕಾರಿಗಳು ಪೂಜೆಗೆ ಗೈರು ಹಾಜರು ಆಗಿದ್ದಾರೆ ಎಂದು ಆರೋಪಿಸಿ ದಲಿತ ಸೇನೆ ನಿಂಬರ್ಗಾ ವಲಯ ಅಧ್ಯಕ್ಷ ಶಶಿಧರ್ ನವರಂಗ್ ಆರೋಪಿಸಿ ನಿಂಬರ್ಗಾ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈ ಕೂಡಲೇ ತಪ್ಪಿಸ್ತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.











