April 19, 2026 9:17 pm

ದತ್ತ ದರ್ಶನಕ್ಕೆ ಬಂದು ಹೊಳೆಯಲ್ಲಿ ಸ್ನಾನಕ್ಕೆ ಇಳಿದ ಯುವಕನ ದುರ್ಘಟನೆ — 23 ವರ್ಷದ ಕರುಣ ನೀರುಪಾಲು

ಅಫ್ಜಲಪುರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಾಲಯದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಾಗಿ ಭಕ್ತರ ಜಾತ್ರೆಮಯ ವಾತಾವರಣ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತನೊಬ್ಬನಿಗೆ ಆಕಸ್ಮಿಕವಾಗಿ ಅಪಘಾತ ಸಂಭವಿಸಿ ಜೀವ ಹೋಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಔರಾದ್ ತಾಲೂಕಿನ ಚಿಕ್ಕಲಿ ಗ್ರಾಮದ 23 ವರ್ಷದ ಕರುಣ ಎಂಬ ಯುವಕ ದೇವರ ದರ್ಶನದ ಬಳಿಕ ಪಾಪವಿನಾಶಿನಿ ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಅಜಾಗರೂಕತೆಯಿಂದ ನೀರಿನ ಆಳಕ್ಕೆ ಜಾರಿಹೋಗಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಪಾಪವಿನಾಶಿನಿ ನದಿಯಲ್ಲಿ ಪ್ರತಿವರ್ಷ ಒಂದಲ್ಲೊಂದು ಸಾವು ಸಂಭವಿಸುತ್ತಿದ್ದು, ಭಕ್ತರ ಜೀವ ಹಾನಿ ತಡೆಯಲು ಸಂಬಂಧಪಟ್ಟ ಇಲಾಖೆಯವರು ನದಿಯ ತೀರದಲ್ಲಿ ಎಚ್ಚರಿಕೆ ಫಲಕಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಅವಶ್ಯಕ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಗಣಗಾಪೂರ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಹೊರತೆಗೆದು ಪಂಚಾಯತ್ ಮಹಾದೇಶಾದಿತ್ಯರ ಸಮ್ಮುಖದಲ್ಲಿ ಪಂಜನಾಮಾ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಸಂಬಂಧ ಗಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

और पढ़ें

best news portal development company in india

Cricket Live Score

Corona Virus

Rashifal

और पढ़ें