ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ತಾಲ್ಲೂಕ ವತಿಯಿಂದ ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಆಚರಣೆಯನ್ನು ದಿನಾಂಕ 29/12/2025 ರಂದು ಇಳೆ ಹೊತ್ತು 4:00 ಗಂಟೆಗೆ ಕನ್ನಡ ಭವನ ಜೇವರ್ಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಚಿರಾಯು ಜ್ಞಾನಿ ಪತ್ರಿಕೆ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮತ್ತು ಸುಮಧುರ ಮೆಲೋಡಿಸ್ ಕಲಬುರಗಿಯಿಂದ ಕನ್ನಡ ಗೀತೆಗಳ ರಸ ಮಂಜರಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ಜರುಗುತ್ತವೆ.ಆದ್ದರಿಂದ ಜೇವರ್ಗಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು. ಎಲ್ಲಾ ಕನ್ನಡ ಪ್ರೇಮಿಗಳು, ಕನ್ನಡ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ.
ಇಂತಿ ತಮ್ಮ ಶ್ರೀ ಎಸ್ ಕೆ ಬಿರಾದಾರ. ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ತಾಲ್ಲೂಕ











