ಅಳಂದ: ಡಾ. ಬಾಬಾಸಾಹೇಬ ಅಂಬೇಡ್ಕರ ಮರಾಠವಾಡಾ ವಿಶ್ವವಿದ್ಯಾಲಯ, ಛತ್ರಪತಿ ಸಂಭಾಜಿನಗರದಿಂದ ಶ್ರೀ ಚಂದ್ರಶೇಖರ ಸಿದ್ದಾರೂಢ ಮುನ್ನೊಳ್ಳಿ ಅವರು ‘ಮ್ಯಾಗ್ನೆಟೊಇಲೆಕ್ಟ್ರಿಕ್ ಎಫೆಕ್ಟ್ ಇನ್ ಫೆರೈಟ್-ಫೆರೊಇಲೆಕ್ಟ್ರಿಕ್ ಕಾಂಪೊಸಿಟ್ಸ್ ಮತ್ತು ದ ಸ್ಟಡಿ ಆಫ್ ಸ್ಟ್ರಕ್ಟುರಲ್, ಎಲೆಕ್ಟ್ರಿಕಲ್ ಅಂಡ್ ಮ್ಯಾಗ್ನೆಟಿಕ್ ಪ್ರಾಪರ್ಟೀಸ್’ ಎಂಬ ವಿಷಯದಲ್ಲಿ ಯಶಸ್ವಿಯಾಗಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಅವರು ಯಶವಂತರಾವ ಚವಾಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸುರೇಂದ್ರ ಎಸ್. ಮೋರೆ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಮುಗಿಸಿಕೊಂಡಿದ್ದಾರೆ.

ಪ್ರಸ್ತುತ ಡಾ. ಚಂದ್ರಶೇಖರ ಎಸ್. ಮುನ್ನೊಳ್ಳಿ ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ,ಎ.ವಿ. ಪಾಟೀಲ ಪದವಿ ಕಾಲೇಜು, ಅಳಂದನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶೈಕ್ಷಣಿಕ ಸಾಧನೆಗಾಗಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ,ಅಧ್ಯಕ್ಷರಾದ ಶಶೀಲ್ ನಮೋಶಿ, ಉಪಾಧ್ಯಕ್ಷರು ಕಾರ್ಯದರ್ಶಿಗಳು, ಡಾ.ಎಸ್.ಹೆಚ್. ಹೊಸಮನಿ (ಪ್ರಾಂಶುಪಾಲರು), ಡಾ.ಎಸ್.ಎಸ್. ಕಮ್ಮಾರ (ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು), ಡಾ.ಆರ್.ಹೆಚ್. ಕದಮ್ ಶ್ರೀ ಕೃಷ್ಣ ಮಹಾವಿದ್ಯಾಲಯ, ಗುಂಜೋಟಿ, ಮಾವನವರಾದ ಅಡವಿರಾಜ ಆತನೂರೆ , ಡಾ. ಬಸವರಾಜ ಮೇಲಗಿರಿ , ಅಕ್ಕ ಡಾ.ಶೋಭಾ ಮೇಲಗಿರಿ, ಅಣ್ಣಂದಿರು ನಾಗೇಂದ್ರ ಮುನ್ನೊಳ್ಳಿ ಮತ್ತು ಅಶೋಕ ಮುನ್ನೊಳ್ಳಿ, ಧರ್ಮ ಪತ್ನಿ ಪ್ರತಿಭಾ ಮುನ್ನೊಳ್ಳಿ ಮತ್ತು ಮುನ್ನೊಳ್ಳಿ ಕುಟುಂಬದ ಎಲ್ಲ ಸದಸ್ಯರು ಹಾರ್ಧಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.











