
ಅಫಜಲಪುರ: ತಾಲೂಕಿನ ಚೌಡಾಪುರ ಗ್ರಾಮದ ಪೂ.ಶ್ರೀ ವಿ.ಎಲ್.ಭಟ್ ಸ್ಮಾರಕ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಡಾಪುರ ಸಹ ಶಿಕ್ಷಕಿಯಾದ ಶ್ರೀಮತಿ ಲೀಲಾವತಿ ಜಟ್ಟೆಪ್ಪ ಜಮಾದಾರ ಅವರ ವಯೋನಿವೃತ್ತಿ ಸನ್ಮಾನ ಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಷ.ಬ್ರ. ಶ್ರೀ ಸಿದ್ದರಾಮ ಶಿವಾಚಾರ್ಯರು,ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಅರುಣ್ ಕುಮಾರ್ ಪಾಟೀಲ್ ಹಾಗೂ ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಜಮಾದಾರ್,ವಿಎಲ್ ಭಟ್ ಶಾಲೆಯ ಮುಖ್ಯಸ್ಥರಾದ ಶ್ರೀ ಗೋವಿಂದ ಭಟ್, ರಾಜ್ಯ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕರ್,ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಾಂಧಿ ದಪೇದರ್ ,ಗ್ರಾಮದ ಮುಖಂಡರಾದ ಸಾಯ್ಬಣ್ಣ ಜಮಾದಾರ್, ದೇವೇಂದ್ರ ಜಮಾದಾರ್ ಹಾಗೂ ಚೌಡಾಪುರ ಶಾಲೆಯ ಮುಖ್ಯ ಗುರುಗಳಾದ ದುಂಡಮ್ಮ ಹೆಗ್ಗಿ,ಗುರು ಉಪದೇಶ ಮಾಸಪತ್ರಿಕೆ ಸಂಪಾದಕರಾದ ಸಿದ್ದನಗೌಡ ಕೆ ಮಾಲಿ ಪಾಟೀಲ್,ಗೌರವ ಸಂಪಾದಕರಾದ ಗುಂಡುರಾವ್ ಕಡಣಿ, ಶಿವಕುಮಾರ್ ಪಾಟೀಲ್ ಚಿಣಮಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದಲ್ಲದೆ ಪರಮಾನಂದ ಶಿಕ್ಷಕರು ನಿರೂಪಿಸಿದರೆ ಸಂತೋಷ ಅವರು ಸರ್ವರನ್ನು ಸ್ವಾಗತಿಸಿದರು, ಶ್ರೀಮತಿ ಶಿಕ್ಷಕಿ ಗಂಗಾ ವಿದ್ಯಾಸಾಗರ್ ಲೀಲಾವತಿಯವರ ಮೇಲೆ ಸ್ವರಚಿತ ಕವನ ವಾಚಿಸಿದರು. ಮಹಾನಂದ ಶಿಕ್ಷಕಿ ಅವರ ಕಿರು ಪರಿಚಯ ಮಾಡಿಸಿದರು ಶ್ರೀ ವಿದ್ಯಾ ಸಾಗರ್ ಜಮಾದಾರ್ ಚಿನಮಗೇರಿ ಸರ್ವರನ್ನು ವಂದಿಸಿದರು.ಚೌಡಾಪುರ ಹಾಗೂ ಚಿನಮಗೇರಿ ಗ್ರಾಮದ ಹಿರಿಯರು ಬಂದು ಮಿತ್ರರು ಹಾಗೂ ಅವರ ಶಿಷ್ಯರ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಿರು ಪರಿಚಯ: ವೆಂಕಪ್ಪಚಾರ್ಯ ಜೋಷಿ ಮತ್ತು ಪದ್ಮಾವತಿ ದಂಪತಿಗಳ ನಾಲ್ಕನೇ ಪುತ್ರಿ ಲೀಲಾವತಿ.ಜೇವರ್ಗಿ ತಾಲೂಕಿನ ಕಾಸರ್ ಭೋಸ್ಟಾ ಹುಟ್ಟೂರು. ಓರ್ವ ಅಣ್ಣ, ಮೂವರು ಅಕ್ಕಂದಿರು, ಹಾಗು ಓರ್ವ ತಂಗಿ ಮತ್ತು ಓರ್ವ ತಮ್ಮಂದಿರರ ನಡುವೆ ಆಡಿ ಬೆಳೆದರು. ಪತಿ ಶಿಕ್ಷಕ ಜೆಟ್ಟೆಪ್ಪ ಜಮಾದಾರ ಅವರ ದ್ವಿತೀಯ ಪತ್ನಿಯಾಗಿ ಲೀಲಾವತಿಯವರು ವಿವಾಹವಾಗಿದ್ದಾರೆ. ಮೊದಲ ಪತ್ನಿ ಸಿದ್ದಮ್ಮ ಅವರೊಂದಿಗೆ ಸಹೋದರಿಯಾಗಿ ಸಹಬಾಳ್ವೆ ಮಾಡಿದ್ದಾರೆ. ಮಕ್ಕಳಾದ ಶ್ವೇತಾ, ಪ್ರಿಯಾಂಕ್, ಚೇತನ್ ಹಾಗು ಸಚ್ಚಿನ್ ಅವರನ್ನು ಪಡೆದುಕೊಂಡಿದ್ದಾರೆ. ಸಚ್ಚಿನ್ ಹೊರತು ಪಡಿಸಿ ಉಳಿದ ಮಕ್ಕಳ ಮದುವೆ ಮಾಡಿದ್ದಾರೆ. ಮೊಮ್ಮಕ್ಕಳೊಂದಿಗೆ ನೆಮ್ಮದಿ ಜೀವನ ಮಾಡುತ್ತಿದ್ದಾರೆ.ಶಿಕ್ಷಕಿ ಲೀಲಾವತಿ ಜೋಷಿಯವರು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ 26 ವರ್ಷ 9 ತಿಂಗಳು ಕಾಲ ಸೇವೆ ಸಲ್ಲಿಸಿ 2025 ಸೆಪ್ಟೆಂಬರ್ 30 ಕ್ಕೆ ನಿವೃತ್ತರಾಗಿದ್ದಾರೆ.












