January 15, 2026 9:18 am

ಅಂಜಿ ಭಯ್ಯ ಅವರ ಮಾನವೀಯ ಸೇವೆ ಗಾಣಗಾಪುರ ಸಂಗಮದಲ್ಲಿ ನಿರ್ಗತಿಕರಿಗೆ ಬಟ್ಟೆ ಹಾಗೂ ಅನ್ನಸಂತರ್ಪಣೆ.

ತೆಲಂಗಾಣ ರಾಜ್ಯದ ಜೋಗುಲಾಂಬ ಗಡ್ವಾಲ್ ಜಿಲ್ಲೆಯ ಶಾಂತಿನಗರ ಮೂಲದ ಗುರುದತ್ತ ಶ್ರೀಪಾದ್ (ಅಂಜಿ ಭಯ್ಯ) ಅವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಸೇವಾ ಚಟುವಟಿಕೆ ಜನಮನ ಸೆಳೆದಿದೆ. ಈ ವರ್ಷವೂ ಅವರು ಗಾಣಗಾಪುರದ ಶ್ರೀ ದತ್ತಾತ್ರೇಯ ಸ್ವಾಮಿ ದೇವಾಲಯದ ಸಂಗಮ ಕ್ಷೇತ್ರದಲ್ಲಿ ಬಡ ನಿರ್ಗತಿಕರು, ವೃದ್ಧರು ಹಾಗೂ ಸಹಾಯವಂಚಿತ ಮಹಿಳಾ–ಪುರುಷರಿಗೆ ಬಟ್ಟೆ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಶ್ರದ್ಧಾ ಪೂರ್ವಕವಾಗಿ ಆಯೋಜಿಸಿದರು.ತ್ತಿಯಲ್ಲಿ ಅಂಬುಲೆನ್ಸ್ ಮಾಲೀಕರಾಗಿರುವ ಅಂಜಿ ಭಯ್ಯ ಅವರು, ಸಾಮಾಜಿಕ ಹೊಣೆಗಾರಿಕೆಯ ಭಾವದಿಂದ ತಮ್ಮ ಜೀವನವನ್ನು ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಅಪಘಾತಕ್ಕೊಳಗಾದವರು ಅಥವಾ ತುರ್ತು ಸ್ಥಿತಿಯಲ್ಲಿರುವವರಿಗೆ ಉಚಿತವಾಗಿ ಆಸ್ಪತ್ರೆಗೆ ಸಾಗಿಸುವ ಸೇವೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಸೇವಾ ಕಾರ್ಯಕ್ರಮದಲ್ಲಿ ಗಾಯತ್ರಿ ಚಂದ್ರಶೇಖರ್, ಶ್ರೀನಿವಾಸರಾವ್, ಹೈದರಾಬಾದ್ ಶ್ರೀನಿವಾಸರೆಡ್ಡಿ, ಕಡಪಾ ಸುಬ್ಬರಾವ್, ಕುರುನೂಲ್ ಸುಬ್ಬರಾವ್, ಅವೋಪ ಸತೀಶ ಮತ್ತು ಗಣಗಾಪುರದ ಗುಂಡು ಬಟ್ಟ ಪುಜಾರಿ ಸೇರಿದಂತೆ ಅನೇಕರು ಪಾಲ್ಗೊಂಡು ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ.

  1. ಧ್ಯಮದವರೊಂದಿಗೆ ಮಾತನಾಡಿದ ಅಂಜಿ ಭಯ್ಯ ಅವರು ಹೇಳಿದರು:

> “ಇದು ನನ್ನಿಂದಾಗುತ್ತಿರುವುದಿಲ್ಲ, ದತ್ತ ಮಹಾರಾಜರ ಕೃಪೆಯಿಂದ ಸಾಧ್ಯವಾಗಿದೆ. ಅವರ ಆಶೀರ್ವಾದ ಇದ್ದರೆ ಮುಂದೆಯೂ ಇದೇ ರೀತಿಯ ಸೇವೆ ಮುಂದುವರಿಸುತ್ತೇನೆ.”

ಕಾರ್ಯಕ್ರಮದಲ್ಲಿ ಮಹೇಶ್ ಮಠ ಬಂದ್ರವಾಡ ಅವರು ಮಾತನಾಡಿ, “ಅಂಜಿ ಭಯ್ಯ ಅವರು ಕಳೆದ 10-12 ವರ್ಷಗಳಿಂದ ನಿರ್ಗತಿಕರು, ವೃದ್ಧರು, ಸಹಾಯವಂಚಿತರಿಗೆ ಆಹಾರ ಮತ್ತು ಬಟ್ಟೆ ವಿತರಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಇವರ ಸೇವಾ ಮನೋಭಾವ ಅಪಾರವಾಗಿದೆ. ದತ್ತ ಮಹಾರಾಜರ ಆಶೀರ್ವಾದ ಸದಾ ಇವರ ಮೇಲೆ ಇರಲಿ,” ಎಂದು ಹಾರೈಸಿದರು.

ದತ್ತನಗರಿ ಗಾಣಗಾಪುರದಲ್ಲಿ ನಡೆಯುತ್ತಿರುವ ಈ ರೀತಿಯ ಮಾನವೀಯ ಸೇವೆ, ಅಂಜಿ ಭಯ್ಯ ಅವರ ನಿಸ್ವಾರ್ಥ ತ್ಯಾಗ ಮತ್ತು ಸಮಾಜಪ್ರೀತಿಯ ಉಜ್ವಲ ಉದಾಹರಣೆ ಎನ್ನಬಹುದು.

Leave a Reply

Your email address will not be published. Required fields are marked *

और पढ़ें

best news portal development company in india

Cricket Live Score

Corona Virus

Rashifal

और पढ़ें